ಶೀಲಾ ದಿಕ್ಷಿತ್ ( ೩೧ ಮಾರ್ಚ್‌ ೧೯೩೮ - ೨೦ ಜುಲೈ ೨೦೧೯ ) ಪಂಜಾಬ್‌ನ ಕಪುರ್ತಲದಲ್ಲಿ ೧೯೩೮ ಮಾರ್ಚ್‌ ೩೧ ರಂದು ಜನಿಸಿದ್ದರು ಮತ್ತು ಎಂ.ಎ(ಇತಿಹಾಸ)ಪದವಿ ಹೊಂದಿದ್ದರು. ಇವರು ದೆಹಲಿಯ ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು. ಇವರು ೧೯೯೮ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಇವರು ೨೦೦೩ರಲ್ಲಿ ಪಕ್ಷವನ್ನು ಗೆಲ್ಲಿಸಿ ಎರಡನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. ೨೦೦೮ರಲ್ಲಿ ನಡೆದ ರಾಜ್ಯ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಇವರು ಮೂರನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ದಾಖಲೆ ಸೃಷ್ಟಿಸಿದರು. ಆದರೆ ೨೦೧೩ ರ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ನವದೆಹಲಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇವರನ್ನು ಸೋಲಿಸಿ ಮುಖ್ಯಮಂತ್ರಿಯಾದರು . ಕೇರಳದ ರಾಜ್ಯಪಾಲರಾಗಿ ೧೧ ಮಾರ್ಚ್ ೨೦೧೪ ರಂದು ಅಧಿಕಾರ ವಹಿಸಿಕೊಂಡರು . ಆದರೆ ೨೫ ಆಗಸ್ಟ್ ೨೦೧೪ರಂದು ಆ ಪದವಿಗೆ ರಾಜೀನಾಮೆ ಇತ್ತರು. = ನಿಧನ = ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು. = ಬಾಹ್ಯ ಸಂಪರ್ಕ = ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ; : 20 ಜುಲೈ 2019, ಕನ್ನಡಪ್ರಭಾದಲ್ಲಿ ಶೀಲಾ ದಿಕ್ಷಿತ್ ಬಗ್ಗೆ ಲೇಖನ 2011-08-22 ವೇಬ್ಯಾಕ್ ಮೆಷಿನ್ ನಲ್ಲಿ. ಜೀವನಘಟನಾ ಸೂಚಿ:(ಟೈಮ್ ಲೈನ್): : ; 20 2019, = ಉಲ್ಲೇಖ =